ಎಲ್ಲಾ ಕಡೆ ದೇವರು ಇದ್ದಾನೆ, ಹೌದು ಕೆರೆ ಮಧ್ಯದಲ್ಲೂ ಕೂಡ

ಗೋಲ್ಡನ್ ಸ್ಟಾರ್ ನಟಿಸಿರುವ “ಮುಗುಳುನಗೆ” ಚಿತ್ರ ಯಾರು ನೋಡಿಲ್ಲ ಹೇಳಿ, ನೋಡಿಲ್ಲ ಅಂದರೂ ಪರವಾಗಿಲ್ಲ. ಆ ಚಿತ್ರದ ಒಂದು ಹಾಡಿನ ಸಾಲುಗಳು ರೀಲ್ಸ್ನಲ್ಲಿ ತುಂಬಾ ಪ್ರಸಿದ್ಧಿಯಾಗಿತ್ತು. ಯಾವ ಹಾಡು ಅಂತಾ ಯೋಚನೆ ಮಾಡುತ್ತಿದ್ದೀರಾ, ಅದೇ “ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ, ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲಾ ಬಾವುಕತೆ “ ಹೌದು ಇದೇ ಹಾಡು ಈಗ ಜ್ಞಾಪಕ ಬಂತ್ರಾ. ಅದೇ ಚಿತ್ರದಲ್ಲಿ ಇನ್ನೊಂದು ಹಾಡು ಇದೆ. ಅದು “ಕೆರೆ ಏರಿ ಮೇಲೆ ಬಂದು ಕುಳಿತುಕೊಂಡ ಚಂದ್ರ ಅಂಗಿ ಬಿಚ್ಚಿ”, ಬೇಗ ಬೇಗ ಪೋನ್ ಕೈಗೆ ತೆಗೆದುಕೊಂಡು ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿ ನೋಡಿ. ನೋಡಿ ಆಯ್ತು ಅಂತ ಅಂದುಕೊಳ್ಳತ್ತಾ, ಇವಾಗ ನಾನು ಹೇಳ್ತಿನಿ ಅದರಲ್ಲಿ ನಿಮಗೆ ಏನು ಇಷ್ಟ ಆಯ್ತು ಅಂತ, ಅಯ್ಯೋ ದೇವರೆ ಯಾವುದು ಗುರು ಇದು ಜಾಗ ಇಷ್ಟು ಚೆನ್ನಾಗಿದೆ. ನಾವು ನೋಡೇ ಇಲ್ಲವಲ್ಲಾ. ನಿಮಗಂತೂ ಒಂದು ಸಲ ಅಲ್ಲಿಗೆ ಹೋಗಲೇ ಬೇಕು ಅಂತ ಪಕ್ಕಾ ಅನಿಸಿತ್ತು ಅಲ್ವಾ. ಅರೇ ಕೆರೆ ಮಧ್ಯದಲ್ಲಿ ಎಷ್ಟು ಚೆನ್ನಾಗಿದೆ. ಏನು ಅದು ಅಂತ ಎಲ್ಲರಿಗೂ ಕುತುಹಲ ಬಂದಿರುತ್ತದೆ.  

ಕದಂಬದ ಕುರಿತು ನಿಮ್ಮ ಅನಿಸಿಕೆ ಮತ್ತು ಸಲಹೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯದಿರಿ.

ನಮ್ಮ ಇಮೇಲ್‌ ವಿಳಾಸ 
editorkadamba@gmail.com
ವಾಟ್ಸ್ಯಾಪ್ ನಂಬರ್‌ 
+91 6363926884

 ಹೌದು, ಈಗ ನಾವು ವಿಷಯಕ್ಕೆ ಬರೋಣ. ಅದು ಒಂದು ಜೈನ ಬಸದಿ. ಎಲ್ಲಿ ಇದೆ ಅಂತ ಹೇಳಿದ್ರೆ, ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನಲ್ಲಿ ವರಂಗ ಒಂದು ಪುಟ್ಟ ಹಳ್ಳಿ. ಇದು ಸುಮಾರು ೮೫೦ ವರ್ಷದ ಬಸದಿ. ಇದನ್ನು ಕೆರೆ ಬಸದಿ ಎಂದು ಕೂಡ ಕರೀತಾರೆ. ಈ ಒಂದು ಜಾಗ ತಲುಪಲಿಕ್ಕೆ ತುಂಬಾ ಸುಲಭ. ಕಾರ್ಕಳದಿಂದ 24 ಕಿಲೋಮೀಟರ್, ಮಣಿಪಾಲ್‌ನಿಂದ 34 ಕಿಲೋಮೀಟರ್, ಉಡುಪಿಯಿಂದ 40 ಕಿಲೋಮೀಟರ್ ಹಾಗೂ 75 ಕಿಲೋಮೀಟರ್ ಮಂಗಳೂರಿನಿoದ. ಬೆಂಗಳೂರಿನಿoದ ಬರುವವರಿಗೆ 375 ಕಿಲೋಮೀಟರ್, ಮೈಸೂರಿನಿಂದ 300 ಕಿಲೋಮೀಟರ್ ಅಷ್ಟೇ.  

 

📍ವರಂಗ ಜೈನ ಬಸದಿ

 

ವಿಶೇಷ ಏನೆಂದರೆ ವರಂಗ ಎಂಬ ರಾಜ ಪ್ರಾಚೀನ ಕಾಲದಲ್ಲಿ ಕಟ್ಟಿಸಿರುವ ದೇವಸ್ಥಾನ ಅಥವ ಬಸದಿ. ಇದು ಸುಮಾರು 11 ಎಕರೆ ಕೆರೆ ಮಧ್ಯದಲ್ಲಿರುವ ಬಸದಿ. ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ, ಮಹಾಮಾತೆ ಪದ್ಮಾವತಿ ಇಲ್ಲಿ ಸ್ಥಾಪನೆ ಆಗಿದ್ದಾರೆ. ನಿಮಗೆ ತುಂಬಾ ಇಷ್ಟವಾಗುವುದು ಏನೆಂದರೆ, ದೋಣಿಯಲ್ಲಿ ನೀವು ಬಸದಿಗೆ ಹೋಗಬೇಕಾಗುತ್ತದೆ. ಆ ಒಂದು ಸುಂದರ ಕ್ಷಣ ನಿಮಗೆ ತುಂಬಾ ಖುಷಿ ನೀಡುತ್ತದೆ. ಈ ದೇವಸ್ಥಾನ ಬೆಳಿಗ್ಗೆ 8.00 ರಿಂದ ಮಧ್ಯಾಹ್ನ 2.00 ಹಾಗೂ ಸಂಜೆ 4.00 ರಿಂದ 6.00ರವರೆಗೆ ತೆರೆದಿರುತ್ತದೆ. 20 ರೂಪಾಯಿ ಟಿಕೆಟ್ ಪಡೆಯಬೇಕು ಅಷ್ಟೇ. ದೋಣಿಯಲ್ಲಿ ನೀರಿನ ಮಧ್ಯೆ ಕೆರೆಯಲ್ಲಿ ಇರುವ ಮೀನುಗಳು, ತಂಪಾದ ಗಾಳಿ ಆ ಸುಂದರ ವಾತಾವರಣ ನಿಮಗೆ ತುಂಬಾ ಖುಷಿ ನೀಡುತ್ತದೆ. ಬಸದಿ ತಲುಪಿದ ಮೇಲೆ ಏನೋ ಒಂದು ಖುಷಿ. ಪಾಸಿಟಿವ್ ಪವರ್ ಬಂದ ಹಾಗೆ ಆಗುತ್ತದೆ. ನೀವು ಆ ಕೆರೆಯಲ್ಲಿ ಕಾಲು ಇಟ್ಟಾಗ ಆಗುವ ಮೈ ರೋಮಾಂಚನ ಹೇಳಲಿಕ್ಕೆ ಪದಗಳೇ ಸಾಲುವುದಿಲ್ಲ. ಅಪ್ಪ ದೇವರೆ ನಾನು ಇಲ್ಲೇ ಇರುತ್ತೇನೆ ಮತ್ತೆ ಹೋಗುವುದೇ ಬೇಡ ಅನ್ನುವಷ್ಟು ಖುಷಿ ನಿಮಗೆ ಆಗುವುದು. ಮೀನು ಕೆರೆಯಲ್ಲಿ ಈಜುತ್ತಿರುವ ಸದ್ದು, ಪಕ್ಷಿಗಳು ಕೂಗುತ್ತಿರುವುದು ಕೇಳೋಕೇ ಒಂದು ಖುಷಿ. ಸಾಕಪ್ಪ ಈ ಜೀವನ ಎಂದು ಒಮ್ಮೆ ಅನಿಸುತ್ತದೆ. ಆಗಾದ್ರೆ ಮತ್ತೆ ಏನು ಯೋಚನೆ ಮಾಡುತ್ತಿದ್ದಿರಾ... ಬರುವ ವಾರದ ಕೊನೆ ಮನೆಯವರ ಒಟ್ಟಿಗೆ ಇಲ್ಲಾ ನಿಮಗೆ ಯಾರು ಇಷ್ಟಾನೋ ಅವರ ಜೊತೆಗೆ “ವರಂಗ”ಕ್ಕೆ ಹೋಗಿ .... ಆ ದೇವರು ಎಲ್ಲಾರನ್ನೂ ಚೆನ್ನಾಗಿ ಇಟ್ಟಿರಲಿ. ಎಲ್ಲರಿಗೂ ಸುಖ-ಶಾಂತಿ-ನೆಮ್ಮದಿ ನೀಡಲಿ ಎಂದು ಕೇಳಿಕೊಳ್ಳೋಣ.  

 

- ಚಂದ್ರಶೇಖರ್.ವಿ