ಕ್ಯಾನ್ಸರ್ ಚಿಕಿತ್ಸೆ ಮತ್ತು ಯೋಗ ವಿಜ್ಞಾನ.

ಅಂತರ ರಾಷ್ಟ್ರೀಯ ಯೋಗದಿನಾಚರಣೆ ಸಂಭ್ರಮ, ಒಂಬತ್ತು ವರ್ಷಗಳು ತುಂಬಿ ಹತ್ತನೇ ವರ್ಷದ ಯೋಗದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸುವ ಸುಸಂದರ್ಭದಲ್ಲಿ ನನ್ನ ಎಲ್ಲ ಓದುಗ ಮಿತ್ರರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು,  ಕ್ಯಾನ್ಸರ್ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಆಗುವ ಪರಿಣಾಮಗಳಿಗೆ ಯೋಗ ಚಿಕಿತ್ಸೆ : ಕ್ಯಾನ್ಸರ್ ನಿಂದ ಬಳಲುತ್ತಿರುವ ಮತ್ತು ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಯೋಗ ಅಭ್ಯಾಸಗಳಾದ ಆಸನ ಪ್ರಾಣಾಯಾಮ ಕ್ರಿಯಾ ಮತ್ತು ಧ್ಯಾನಗಳನ್ನು ಅಳವಡಿಸಿಕೊಳ್ಳುವುದರಿಂದ  ವಿಶ್ರಾಂತಿ ಜೊತೆ ಚಿಕಿತ್ಸೆ ಯ ನೋವು ಸುಸ್ತು ಮತ್ತು ಮಾನಸಿಕ ಖಿನ್ನತೆ ಗಳನ್ನು ನಿವಾರಿಸಿ ಕೊಳ್ಳಬಹುದು ಎನ್ನುತ್ತವೇ ಹಲವು ಸಂಶೋಧನೆಗಳು. 
ಹಲವು ಅಧ್ಯಯನಗಳ ಪ್ರಕಾರ ಹೀಗೆ ಕ್ಯಾನ್ಸರ್ ಚಿಕಿತ್ಸೆ ಯಲ್ಲಿ ಮಾನಸಿಕ ಮತ್ತು ದೈಹಿಕ ನೋವುಗಳು ಕಾಡುತ್ತವೆ ಇಂತಹ ಸಂದರ್ಭದಲ್ಲಿ ಸಾಂಪ್ರದಾಯಿಕ ಕ್ಯಾನ್ಸರ್ ಚಿಕಿತ್ಸೆಗಳಾದ ರೇಡಿಯೋಥೆರಪಿ, ಕೀಮೊತೆರಪಿಗಳ ಜೊತೆ ಜೊತೆ ಯೋಗ ಅಭ್ಯಾಸ ಮಾಡುವುದರಿಂದ ಚಿಕಿತ್ಸೆ ಮತ್ತಷ್ಟು ಫಲಕಾರಿ ಆಗುವುದಲ್ಲದೆ ರೋಗವನ್ನು ಎದುರಿಸಲು ಸಾಧ್ಯವಾಗುವ ಧನಾತ್ಮಕ ಚಿಂತನೆ ವೃದ್ಧಿ ಆಗುತ್ತದೆ ಮತ್ತು ಉತ್ಕೃಷ್ಟ ಬದುಕನ್ನು ಕಳೆಯಲು ಸಾಧ್ಯವಾಗುತ್ತದೆ International Journal of Health Science and Research ಸಂಸ್ಥೆ ನಡೆಸಿದ ಅಧಯಯನವು ಕ್ಯಾನ್ಸರ್ ಚಿಕೆತ್ಸೆಯಲ್ಲಿ ಯೋಗ ಚಿಕಿತ್ಸೆ ಮತ್ತು ಪ್ರಕೃತಿ ಚಿಕಿತ್ಸೆ ಯ ಅಪಾರ ಅನುಕೂಲತೆಗಳನ್ನು ಸವಿಸ್ತಾರವಾಗಿ ವರದಿ ಮಾಡಿದೆ 
ಕ್ಯಾನ್ಸರ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ, ಕಿಮೊತೆರಪಿ ಮತ್ತು ರೇಡಿಯೋಥೆರಪಿ ಸಮಯದಲ್ಲಿ ಆತಂಕ, ಒತ್ತಡ, ಉದ್ವೇಗ ಕಡಿಮೆ ಮಾಡಲು ಯೋಗ ಚಿಕಿತ್ಸೆ ಸಹಾಯ ಮಾಡುತ್ತದೆ ಮತ್ತು ನಿದ್ರಾಹೀನತೆ., ವಾಕರಿಕೆ ಅಥವಾ ವಾಂತಿ, ವಿಕಿರಣ ಪ್ರೇರಿತ ಅಡ್ಡಪರಿಣಾಮ, ಕೈ ಕಾಲು ನೋವು ಮತ್ತು ಮರಗಟ್ಟುವುದು ಇಂತಹ ಸಮಯದಲ್ಲೂ ಯೋಗ ಚಿಕಿತ್ಸೆಯ ಪ್ರಯೋಜನ ಅಪಾರ. 
ಆಸನ ಅಭ್ಯಾಸ: ನಿಯಮಿತ ಯೋಗಾಸನ ಅಭ್ಯಾಸ ಮಾಡುವುದರಿಂದ ಬೊಜ್ಜನ್ನು ದೂರವಿಡುವ ಜೊತೆ ಮಾಂಸ ಖಂಡಗಳಿಗೆ ರಕ್ತಪರಿಚಲನೆ ಹೆಚ್ಚಿಸುತ್ತದೆ ಇದರಿಂದ ಮಾಂಸ ಖಂಡಗಳಿಗೆ ವಿಶ್ರಾಂತಿ ಜೊತೆ ನೋವು ಗಳು ಕಡಿಮೆಯಾಗುತ್ತದೆ ಮತ್ತು ಸಂಧಿವಾತ ಸಮಸ್ಯೆಗಳು ದೂರವಾಗುತ್ತವೆ. 
ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸಗಳು: ಪ್ರಾಣಾಯಾಮ ಮತ್ತು ಧ್ಯಾನ ಅಭ್ಯಾಸಗಳನ್ನು ನಿಯಮಿತವಾಗಿ ಮಾಡುವುದರಿಂದ ಉಸಿರಾಟದ ಶಕ್ತಿ ವೃದ್ಧಿಯಗುವುದಲ್ಲದೆ ಮನಸ್ಸನ್ನು ಉಲ್ಲಸಿತ ವಾಗಿರಿಸಬಹುದು ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ಧನಾತ್ಮಕ ಚಿಂತನೆ ವೃದ್ಧಿಸಿ ಮನೋಬಲ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ.  
ಕ್ಯಾನ್ಸರ್ ಬಂತೆಂದು ಹೆದರಿ ಜೀವನವೇ ಮುಗಿಯಿತು ಎಂದು ಋಣಾತ್ಮಕ ಚಿಂತನೆಯಿಂದ ಸುಮ್ಮನೆ ಏಕೆ ಕೂರಬೇಕು ಅಲ್ಲವೇ?   ಲಕ್ಷಾಂತರ ಕ್ಯಾನ್ಸರ್ ರೋಗಿಗಳು ಇಂದು ತಮ್ಮ ಚಿಕಿತ್ಸೆ ಮುಗಿಸಿ ಹಿಂದೆಂದಿಗಿಂತಲೂ ಅತೀ ಉತ್ಸಾಹ ಮತ್ತು ಧನಾತ್ಮಕತೆಯಿಂದ ಜೀವಿಸುತ್ತಿದ್ದಾರೆ. ಅಂತಹ ನಿಜ ಜೀವನ ಹೀರೋಗಳಿಗೆ ನನ್ನ ಸಲ್ಯೂಟ್. 
ವೈದ್ಯರ ಸಲಹೆ ಮತ್ತು ಔಷಧಿ ಜೊತೆಗೆ  ಉತ್ತಮ ಆಹಾರ ಪದ್ಧತಿ, ಯೋಗ ಮತ್ತು ವ್ಯಾಯಾಮ, ನಿಯಮಿತ ದೈಹಿಕ ಚಟುವಟಿಕೆಗಳು ಯಾವದೇ ಕ್ಯಾನ್ಸರ್ ಮತ್ತು ಅದರ ಪರಿಣಾಮಗಳನ್ನು ಎದುರಿಸಿ ನಿಲ್ಲಬಲ್ಲದು. ಓದುಗರೇ ಪರಿಣತ ಯೋಗ ಗುರುಗಳನ್ನು ಭೇಟಿ ಮಾಡಿ, ಇಂದೇ ಯೋಗ ಅಭ್ಯಾಸವನ್ನು ಪ್ರಾರಂಭಿಸೋಣ 

 

-ಡಾ. ಚಂದನ್ ಕರೀಗೌಡ.  

BNYS, MD(Acu), MSc (CND), FIBAA