ಚದುರಿದ ಗಿರಿ ಪರ್ವತಗಳು, ಕಣ್ಣು ಹಾಯಿಸಿದಷ್ಟು ಪ್ರಕೃತಿಯ ಸೊಬಗು, ಈ ಸೊಬಗಿಗೆ ಕೊಡುಗೆಯಿತ್ತಂತೆ ಸೂರ್ಯನು ತನ್ನ ಕೆಂಪಾದ ಬೆಳಕು ಚೆಲ್ಲಿ ಪ್ರಕೃತಿಯ ಚೆಲುವನ್ನು ಇಮ್ಮಡಿಗೊಳಿಸಿದ್ದ. ಬಾಲ್ಕನಿಯಿಂದ ನೆರವಾಗಿ ಸುಯುತ್ತಿದ್ದ ಸಂಜೆಯ ತಿಳಿ ತಂಗಾಳಿಯು, ತನ್ನ ಮಾಯದ ಬಳೆಯಲ್ಲಿ ವೀಣಾಳನ್ನು ಕಬಳಿಸಿತ್ತು. ಇದಕ್ಕೆ ಸಾಕ್ಷಿ ಎಂಬ0ತೆ ಅವಳ ಕೈಯಲ್ಲಿದ್ದ ಬಿಸಿ ಕಾಫಿಯು ತನ್ನ ಶಕ್ತಿಯನ್ನು ಕಳೆದುಕೊಂಡಿತ್ತು. ಗಾಳಿಗೆ ಮೈಒಡಿ ನಿಂತಿದ್ದ ವೀನಾಳ ರೇಷ್ಮೆಯ ಕುದಳು ಕೆನ್ನೆಯನ್ನು ಸವರಿಕೊಂಡು ಸುಯುತ್ತಿದ್ದ ಗಾಳಿಯ ಹಾದಿ ಹಿಡಿದಿತ್ತು. ಇದ್ಯಾವುದರ ಪರಿವೇ ಇಲ್ಲದೆ ನಿಂತಿದ್ದ ಅವಳ ಕಣ್ಣಿನಿಂದ, ಎಷ್ಟೋ ವರುಷದ ತಪಸಿನ ಫಳದಂತೆ ಕಣ್ಣಿರು ಸುರಿಯುತ್ತಿತ್ತು. ಜಗತ್ತನೆ ಗೆದ್ದ ಕುಷಿ, ತನ್ನ ಕುಷ್ಷಿಯನ್ನು ಹಂಚಿಕೊಳ್ಳಬೇಕೆoದು ತಳಮಳ. ಅವಳ ತಪಸನ್ನು ಬಂಗಗೊಳಿಸಿ ಮನು ಹಿಂಬದಿಯಿoದ ಗಟ್ಟಿಯಾಗಿ ಅಪ್ಪಿಕೊಂಡ. ಚುಪಾದ ಗಡ್ಡವು ಅವಳ ಮೃದುವಾದ ಕೆನ್ನೆಯ ಸೊಕಿ ಕಚುಗುಳಿ ಇಡುತ್ತಿತ್ತು. ಅವಳ ಸೌಂದರ್ಯಕ್ಕೆ ಸೋತ ಮನು ಅದಾಗಲೆ ಶರಣಾಗತನಾಗಿದ್ದ. ಮೃದುವಾಗಿ ಕೆನ್ನೆಗೆ ಮುತ್ತೊಂದ ಇಟ್ಟು ಅವಳನ್ನು ಬಿಡುಗಡೆಗೊಳಿಸಿದ. ಮನುವಿನ ಕಣ್ಣನು ದಿಟ್ಟಿಸುತ್ತಾ ಮೌನವನ್ನು ಮುರಿದು ಪ್ರಶ್ನೆಯ ಹಾಕಿದಳು ‘ಮನು, ಯಾಕೆ ಇಷ್ಟು ಲೇಟು?’ ಮೃದುವಾದ ನಗೆಯೊಂದಿಗೆ ಮನು, ‘ಅದು ಎರ್‌ಪೊರ್ಟ್ನಿಂದಾ ಬರಬೇಕಾದ್ರೆ ಫ್ರೆಂಡ್ ಸಿಕ್ಕಿದಾ ಸೋ.....’ ಮನುವಿನ ಮಾತನ್ನು ಕಟ್ಟಿಹಾಕಿ ‘ಪ್ಲೀಸ್ ಡೋಂಟ್ ಗಿವ್ ಇವರ್ ಸಿಲ್ಲಿ ರೀಸನ್’ ಎನ್ನುತ್ತಾ ಸಿಟ್ಟಿನಿಂದಾ ತಿರುಗಿ ಚಾರ್ಮಡಿಯತ್ತ ಕಣ್ಣುಹಾಯಿಸಿದಲ್ಲು. ಅವಳ ಕೈಮೇಲೆ ತನ್ನ ಕೈಯನಿಟ್ಟ ಮನು, ಅವಳನ್ನಾ ಅನುಸರಿಸುತ್ತಾನೆ. ವೀನಾ ಅವನಿಗೆ ಕೇಳುವ ಹಾಗೆ ಗೊಣಗುತ್ತಾ ‘ಜರ್ಮನಿಯಲ್ಲಿ ಯಾವಲನ್ನಾದರು ಇಟ್ಟ್ಕೊಂಡಿರಬೇಕು ಅದ್ಕೆ ನನಗೆ ಕಾಲು ಮಾಡಲ್ಲಾ ಸರಿಯಾಗಿ ಉತ್ತರಾನ್ನು ಕೊಡಲ್ಲಾ’. ವೀನಾಲತ್ತ ತಿರುಗಿ ‘ಯಾಕ್ಕೆ ಮಾರಾಯಿತಿ ನನ್ ಮೇಲೆ ಇಷ್ಟ ಕೋಪಾ, ನಿನಗೆ ಅನ್ಸತ್ತಾ ಈ ಮುಸುಡಿಗೆ ಯಾರಾದ್ರು ಬಿಳ್ತಾರಂತಾ’. ಅವನ ಮಾತಿಗೆ ನಗು ತಡಿಯಲಾಗದೆ ಪಕ್ಕಕೆ ಮುಖ ತಿರುಗಿಸಿ ಮುಗುಳ್ನಕ್ಕಳು. ‘ಕಾಲೇಜ ಡೇಸ್ ಇಂದಾ ನಿಂಗೊತ್ತೆ ಇದೆ ನಮ್ನಾ ಎಲ್ರು ಏನಂತಾ ಕರಿತ್ತಿದ್ರು’ ಪಕ್ಕಕೆ ತಿರುಗಿದ ವೀನಾ ಅವನ್ನನಾ ನೋಡಿ ಜೋರಾಗಿ ನಗಳು ಆರಂಭಿಸಿದಳು. ನಗುವಿಗೆ ಬ್ರೇಕ್ ಹಾಕಿದ ವೀನಾ ‘ಬ್ಲಾಕ್ & ವೈಟ್ ಲವ್ ಸ್ಟೋರಿ ರಯಿಟ್’ ಅಂತಾ ಹೇಳುತಾ ಮತ್ತೆ ನಗುವನ್ನಾ ಮುಂದುವರಿಸಿದಳು. ಮನು ಕಪ್ಪು ಮಯಿಬಣ್ಣಾ ಹೊಂದಿದರು ಲಕ್ಷಣವಾಗಿದಂತಾ ಹುಡುಗಾ, ಅವಳಂತೆ ಕಪ್ಪು ರೇಶ್ಮೆ ಕುದಳು, ಸುಂದರವಾದ ನಗು, ಗಟ್ಟಿದೇಹಾ. ಅವಳ ಸಿಟ್ಟಿಗೆ ವಿರಾಮ ಸಿಕ್ಕಂತೆ ನಿಟ್ಟುಸಿರು ಬಿಡುತ್ತಾ ‘ವೀನಾ ಆಗಾಗ ನನ್‌ಫ್ರೆಂಡ್ಸ್ ಕಾಲ್ ಮಾಡಿದ್ರೆ ಈ ಮಾತ್ ಹೇಳ್ದೆ ಕಾಲ್ ಇಡಲ್ಲಾ’ ಏನು ಎಂಬoತೆ ತಲೆ ಆಡಿಸಿದ ವೀನಾಳ ಸನ್ನೆಗೆ ಉತ್ತರಿಸುತ್ತಾ ‘ವೀನಾ ಅದ ಹೇಗೆ ನಿನಗೆ ಬಿದ್ಲು ಮಚ್ಚಾ, ಇಡಿ ಕಾಲೇಜೆ ಅವಳ ಹಿಂದೆ ಇತಲ್ವೋ’ ಅಂತಾ ಹೇಳಿ ಹೇಳಿ ನನ್ನಾ ಡೀಮೋಟಿವೇಟ್ ಮಾಡ್ತಿರ್ತಾರೆ. ವೀನಾ ಏನ್ನನೋ ಜ್ಞಾಪಿಸಿಕೊಳುತ್ತಾ ‘ಆದ್ರೆ ಏನೆ ಹೇಳು ದೋಸ್‌ಡೇಸ್ ವೇರ್‌ಸೋ ಗುಡ್’. ಮನು ದಿಟ್ಟಿಸುತ್ತಾ ‘ಹೌದು’ ಎಂಬoತೆ ತಲೇ ಆಡಿಸಿದ. ಏನೋ ಜ್ಞಾಪಕವಾದಂತೆ, ವೀನಾ ಮನುವಿನ ಕೈ ಹಿಡಿದು, "ಮನು, ನಿನಗೆ ಒಂದ್ ವಿಷಯಾ ಹೇಳ್ಬೆಕಂತಾ ತುದಿಗಾಳಲ್ಲಿ ಕಾಯ್ತಿದ್ದೆ." "ಐ ಫಿನಿಷ್ಡ್ ಮೈ ವರ್ಕ್." ಮನುವಿನ ಮುಖದಲ್ಲಿ ಮುಗುಲ್ನಗೆಯೊಂದು ಅರಳಿ. "ಈಸ್ ಇಟ್, ಹಾಗಾದ್ರೆ ನಿನ್ನ ಕನಸಿನ ಆವಿಷ್ಕಾರಕ್ಕೆ ಜೀವ ಬಂತಾ." ವೀನಾ ಎರಡು ಕೈ ಕಟ್ಟಿ, "ಹಾ ಅದು ಪ್ರೋಟೋಟೈಪ್ ಅಷ್ಟೇ, ಎಕ್ಸಪೆರಿಮೆಂಟ್ ಮಾಡಬೇಕು." ವೀನಾ ಮೃದು ಧ್ವನಿಯಲ್ಲಿ, "ಮನು, ಈ ಸಾರಿನು ನೀನೇ ನನ್ನ ಸ್ಯಾಂಪಲ್ ಆಗಬೇಕು. ಪ್ಲೀಸ್ ಇಲ್ಲಾ ಅಂತಾ ಅನ್‌ಬೇಡಾ." ಬಯಬೀತನಾದಂತೆ 'ಅಯೋ ಮಾರಾಯ್ತಿ ಈ ಕೆಲಸಾ ಒಂದ್ ಬಿಟ್ಟು ಬೇರೆ ಏನ್ ಬೇಕಾದ್ರು ಹೇಳು, ಐ ವಿಲ್ ಡೂ ಆದ್ರೇ ಈ ಶಾಕ್ ಟ್ರೀಟ್‌ಮೆಂಟ್ ಕೊಡೊ ನಿನ್ ಆವಿಷ್ಕಾರದ ಉಸಾಬರಿ ನಂಗ್ ಬೇಡಾ.' ವೀನಾ ಬೇಜಾರಾದಂತೆ ನಟಿಸುತ್ತಾ ಬಾಲ್ಕನಿಯಿಂದಾ ಒಳ ನಡೆದಳು. ವೀನಾ ಚಿಕ್ಕ ವಯಸಿನಿಂದಲ್ಲೂ ಚುರುಕಾದ ಹುಡುಗಿ. ತಂದೆ ರಾಮನ್ ಸೈನ್‌ಟೀಸ್ಟ್ ಆಗಿದ್ದರಿಂದ, ಯಾವಾಗಳು ಹೊಸ ಹೊಸ ವಿಷಯದ ಕುರಿತು ಮಾಹಿತಿ ತಿಳಿದುಕೊಳುತಿದಳು. ತಂದೆಯ ಮಾತನು ಮೀರದೆ, ಇಷ್ಟವಿರದ್ದಿದರು ರಾಮಯ್ಯ ಕಾಲೇಜನಲ್ಲಿ ಸೀಟ್ ಒಂದನ್ನು ಗಿಟ್ಟಿಸಿಕೊಂಡಳು. ತನ್ನ ೬ ನೇ ವಯಸಿನಲ್ಲೆ ತಾಯಿಯನ್ನು ಕಳೆದುಕೊಂಡಿದರು, ತಂದೆಯನ್ನು ಚೆನ್ನಾಗಿ ಪೋಷಿಸುತ್ತಿದ್ದಳು. ಈ ಕಾರಣದಿಂದಾಗಿ ತಂದೆಯನ್ನು ಬಿಟ್ಟು ದೂರ ಹೋಗಳು ಹಿಂದೇಟು ಹಾಕುತ್ತಿದ್ದಳು. ಟಾಪ್ ಕಾಲೇಜ್ ಅಂತಾ ಹೇಸರು ಮಾಡಿದ ರಾಮಯ್ಯಾ ಕಾಲೇಜನಲ್ಲಿ ಪುಂಡಾಟಿಕೆಗೂ ಹೇಸರು ವಾಸಿಯಾಗಿತ್ತು. ಸೇರಿದ ಕೆಲವು ದಿನಗಳಲ್ಲೆ ವೀಣಾ ಕೈಗೆ ಹಲವರಿಂದ ಪ್ರೇಮ ಪತ್ರಗಳು ಬರಳು ಆರಂಬಿಸಿದವು. ಬರುವ ಪತ್ರಗಳಿಂದ ರೋಸಿಹೊಗಿದ ವೀನಾ, ಅವನ್ನಾ ಗುಡೆ ಹಾಕಿ ಆಗಾಗ ಸುಡುತ್ತಿದಲ್ಲು. ಇಂತಹಕ್ಕೆಲ್ಲಾ ಹೆಚ್ಚು ತಲೆ ಕೊಡದೆ ತನ್ನ ಕನಸಿನ 'ಕಾಂಟಮ್ ಫಿಸಿಕ್ಸ್’ ವಿಷಯದಲ್ಲಿ ಪಿ.ಹೆಚ್.ಡಿ ಪಡಿಬೇಕು ಅಂತಾ ಹಗಳು ರಾತ್ರಿ ಶ್ರಮಿಸುತ್ತಿದಲ್ಲು. ಹೀಗೆ ಬಂದoತಹ ಹಲವು ಪತ್ರಗಳಲ್ಲಿ ಅನಾಮಿಕನ ಪತ್ರ ಇವಲ್ಲ ಕೈ ಸೇರತ್ತೆ.
ವೀಣಾ ನಡೆದ ಹಾದಿಯನ್ನು ಗಮನಿಸುತ್ತಾ, ಮನು ಆಯಾಸದ ನಿಟ್ಟುಸಿರು ಬಿಟ್ಟನು. ಅವಳ ಕೋಪವನ್ನು ತಿಳಿಗೊಳಿಸಲು ಇವನಿಗೆ ಕಷ್ಟವೇನಿರಲಿಲ್ಲ. ಬಾಲ್ಕನಿಯ ಮೆಟ್ಟಿಲ ಮೇಲೆ ಕೂತಿದ್ದ ವೀಣಾಳನ್ನು ಗಮನಿಸಿ, ಅವಳ ತಲೆ ಸವರುತ್ತಾ, ‘ನಿನ್ನ ನಾಟಕ ನೋಡಿದಿನಿ ಸಾಕು, ಈಗಾ ಎಕ್ಸ್ಪೇರಿಮೆಂಟ್ ಯಾವಾಗ?’ ಎಂದನು. ವೀನಾ ಕರುಣೆಯಿಂದಾ ‘ಇವತ್ತೆ ಕಣೋ, ಅಪ್ಪಾ ಕೊಟ್ಟಿಗೆಹಾರಕೆ ರ‍್ತಿದ್ದಾರೆ’ ಎಂದಳು. ಮನು ಗಾಬರಿಗೊಂಡವನoತೆ ‘ಇವತ್ತೆನಾ’ ಎನ್ನುತ್ತಾ ಆಶ್ಚರ್ಯಚಕಿತನಾದ. ಹೂಂ…ಎoದು ತಲೆ ಆಡಿಸುತ್ತಾ ‘ನಾವು ಎಕ್ಸಪೇರಿಮೆಂಟ್ ಗೆ ಯುಸ್ ಮಾಡ್ತಿ ಇರೊ ಲಿಕ್ವೀಡ್, ಕಡಿಮೆ ಅವಧಿಯಲ್ಲಿ ತನ್ನ ಶಕ್ತಿಯನ್ನು ಕಲೆದುಕೊಂಡುಬಿಡುತ್ತದೆ. ಸೊ ಅದಿಕ್ಕೆ ಬೇಗಾ ಮಾಡ್ಬೇಕಾಗುತ್ತೆ’ ವೀಣಾಳಿಗೆ ಈ ಪ್ರಾಜೆಕ್ಟ್ ಎಷ್ಟು ಮುಖ್ಯವೆಂದು ಅರಿತಿದ್ದ ಮನು, ನಿರಾಶೆಗೊಳಿಸದೆ ಸರಿ ಎಂಬoತೆ ತಲೆ ಆಡಿಸಿದ. ‘ಸರಿ ಬೇಗಾ ರೇಡಿ ಆಗು, ಕಾಫಿ ರೇಡಿ ಮಾಡ್ತಿನಿ’ ಎನ್ನುತ್ತಾ ವೀಣಾ ಒಳಗೆ ನಡೆದಳು.
ಚಾರ್ಮಡಿಯ ಬೆಟ್ಟವು ಕಾಣದ ಹಾಗೆ ಮಳೆಯು ಸುರಿಯುತ್ತಿತ್ತು. ಮನುವಿನ ಎಡಗೈಯಲ್ಲಿ ಸಿಗರೇಟ್ ಉರಿಯುತ್ತಿದ್ದರೆ ಮತ್ತೊಂದು ಕೈಯಲ್ಲಿ ಕಾಫಿ ಮಗ್ ಹಿಡಿದ್ದಿದ್ದ. ಎದುರಿಗೆ ಕುಳಿತಿದ್ದ ವೀಣಾ ತನ್ನ ಎರಡು ಕೈಗಳಿಂದ ಕೆನ್ನೆಗೆ ಅಪ್ಪಿ, ಮನುವನ್ನು ದಿಟ್ಟಿಸುತ್ತಿದ್ದಳು. ಸಣ್ಣ ನಗೆಯೊಂದಿಗೆ ಮನು ‘ಯಾಕೆ ಏನಾಯ್ತು, ಹಾಗೇ ನೋಡ್ತಿದ್ದೀಯಾ?’ ಎಂದು ಕೇಳೆದ. ಮನುವಿನ ಪ್ರಶ್ನೆಗೆ ಉತ್ತರಿಸುತ್ತ ವೀನಾ ‘ಇಷ್ಟು ದಿನ ನನ್ನ ಬಿಟ್ಟು ಹೇಗಿದ್ದೆ?’ ವೀಣಾಳ ಕಣ್ಣ ಅಂಚಲ್ಲಿ ನೀರು ತುಂಬಿತು. ಮನು ಚಹರೆಯಲೊಂದು ಸಣ್ಣ ನಗು ಅವಳ ಎಲ್ಲ ಪ್ರಶ್ನೆಗು ಉತ್ತರ ನೀಡಿತು. ಜೋರಾಗಿ ನೆಲಕ್ಕೆ ಅಪ್ಪಳಿಸುತ್ತಿದ್ದ ಮಳೆ ಇವರಿಬ್ಬರ ಗಾಢ ಮೌನವನ್ನು ಭಂಗಗೊಳಿಸುತ್ತಿತ್ತು. ಇದಕ್ಕೆ ಸಾತ್ ಎಂಬoತೆ ಹೊರಗಡೆಯಿಂದ ಟ್ರೀನ್ ಟ್ರೀನ್ ಎನ್ನುತ್ತಾ ಮನೆಯ ಬೆಲ್ ಹೊಡೆದುಕೊಂಡಿತು.
ಹೊರಗಡೆ ಮೆಕ್ಯಾನಿಕ್ ಹರೀಶ ವೀಣಾಳನ್ನು ನಿರೀಕ್ಷಿಸುತ ನಿಂತಿದ. ವೀಣಾ ಒದ್ದೆ ಕಣ್ಣನ್ನು ಒರೆಸಿಕೊಳ್ಳುತ್ತ ಮುಖ್ಯದ್ವಾರದ ಬಳಿ ನಡೆದರೆ, ಮನು ಉರಿಯುತ್ತಿದ ಸಿಗರೇಟ್‌ನಿಂದ ಕೊನೆಯ ಪಫ್ ಎಳೆದು ಗೋಡೆಗೆ ಉಜ್ಜಿದ. ಬಾಗಿಲು ತೆರೆದ ವೀಣಾ ಹರೀಶ್‌ನನ್ನು ಗಮನಿಸಿ ‘ಏನೋ ಹರೀಶಾ, ಕಾರ್ ಯಾವಾಗ ಕೊಡೊದ್ದಂತ ಅಂದಿದೆ? ಎಂದು ರೋಸಿಹೊದವಳಂತೆ ಮಾತಾಡಿದಳು.
ಶರಣಾಗತನಾದಂತೆ ಹರೀಶ ‘ ಇಲ್ಲಾ ಅಕ್ಕ ಅದು.....’ ಅವನ ಮಾತನ್ನು ಮುಂದುವರೆಸಲು ಅವಕಾಶ ನೀಡದೆ ‘ ಅಯ್ಯೋ ಮಾರಾಯಾ ನಿನ್ನ ಕಥೆ ಕೇಳೋಕೆ ನಂಗ್ ಟೈಮ್ ಇಲ್ಲಾ, ಎಲ್ಲಿ ಕೀ ತಾ’ ಎಂದು ಅವನ ಕೈಯಿಂದ ಕೀ ಕಸಿದುಕೊಂಡಳು. ಹಾಲ್‌ಗೆ ಅಂಟುಕೊoಡಿದ್ದ ಬಾಲ್ಕನಿಯ ಮೆಟ್ಟಿಲುಗಳಿಂದ ಮನು ಇಳಿಯುತ್ತ ‘ಏನೊ ಹರೀಶಾ ಹೇಗಿದ್ದೀಯಾ?’ ಎನುತ್ತ ಅವರಲ್ಲಿಗೆ ನಡೆದ. ಹರೀಶನಿಗೆ ಮನು ಕಂಡರೆ ಎಲ್ಲಿಲ್ಲದ ಗೌರವ, ಕಷ್ಟಕಾಲದಲ್ಲಿ ಮನು ಮಾಡಿದ ಧನ ಸಹಾಯದಿಂದಾಗಿ ಹರೀಶನ ಗ್ಯಾರೇಜ್ ಉಳಿದಿತ್ತು. ಹೀಗಾಗಿ ಹರೀಶ್ ಇವರ ಮನೆ ಕೆಲಸಗಳಿಗೂ ಕೂಡಾ ಕೈ ಜೋಡಿಸುತ್ತಿದ್ದ. ಮನುವಿನ ಪ್ರಶ್ನೆಗೆ ಉತ್ತರಿಸುತ್ತ ‘ಅಣ್ಣ ಚೆನ್ನಾಗಿದಿನಿ ನೀವ್ ಹೇಗಿದ್ದಿರಾ?’. ಅವನ ಭುಜ ತಟ್ಟುತ್ತ ‘ನಾನ ಸೂಪರ್ ಕಣೊ’ ಎಂದು ಹೆಗಲಿಗೆ ಕೈ ಹಾಕಿದ. ವೀಣಾ ಇವರ ಮಾತುಗಳಿಗೆ ತಡೆ ಹಾಕಿ ‘ಮನು ಅಪ್ಪಾ ಕೊಟ್ಟಿಗೆಹಾರದಲ್ಲಿ ಕಾಯ್ತಾ ಇದ್ದಾರೆ, ಪ್ಲೀಸ್ ಬೇಗಾ ಹೊಗ್ಬೆಕು’. ವೀನಾ ತನ್ನ ಅಧ್ಯಯನದ ಮುಂದುವರೆದ ಭಾಗವಾಗಿ, ಅವಳ ತಂದೆ ಹಾಗೂ ಗೆಳೆಯ ಲೂಯಿಸ್ ಜೊತೆ ಒಡಗೂಡಿ ಯಂತ್ರವೊoದನ್ನು ಆವಿಷ್ಕರಿಸಿದ್ದರು. ಈ ಮೂಲಕ ಮನುಷ್ಯನ ನಡವಳಿಕೆ, ಬುದ್ಧಿಶಕ್ತಿ ಹಾಗೂ ಗುಣಗಳನ್ನು ಒಂದು ಚಿಪ್ (ಮೆಮೋರಿ ಚಿಪ್) ಮೂಲಕ ಕ್ಲೋನ್ ಮಾಡುವ ಯಂತ್ರ ಇದಾಗಿತ್ತು. ಮನುಷ್ಯ ನಿರ್ಮಿತ ರೋಬಾಟ್ ಗಳಿಗೆ ಈ ಚಿಪ್ ಸೇರಿಸಿದರೆ ಕ್ಲೋನ್ ಮಾಡಳಾದ ಮನುಷ್ಯನ ನಡವಳಿಕೆಯನ್ನು ಅನುಸರಿಸುತ್ತದೆ.

ಎಕ್ಸಪೆರಿಮೆಂಟಗೆ ೧೦ ನಿಮಿಷ :
ಕೊಟ್ಟಿಗೆಹಾರದ ಲ್ಯಾಬ್ ಮನುವಿಗೆ ಅಪರಿಚಿತವಾದದ್ದು, ಕಣ್ಣಿಗೆ ಬಟ್ಟೆ ಕಟ್ಟಿ ಕರೆದುಕೊಂಡು ಬರೊದಾದ್ರು ಏಕೆ ಎಂಬುದು ಮನುವಿನ ಪ್ರಶ್ನೆ? ಇಷ್ಟು ಕಾನ್ಫಿಡೆನ್ಶಿಯಲ್ ಕೆಲಸವನ್ನ ವೀಣಾ ಏಕೆ ಮಾಡ್ಬೆಕು? ಇವಳ ತಂದೆಯ ಉದ್ದೆಶವಾದ್ರು ಏನು? ಇಷ್ಟೂ ಪ್ರಶ್ನೆಗಳು ಮನು ತಲೆಯಲ್ಲಿ ಓಡುತ್ತಿತ್ತು. ಸೂಕ್ಷö್ಮವಾಗಿ ಮನು ಎಲ್ಲವನ್ನು ಗಮನಿಸುತ್ತಿದ್ದ. ಮಷಿನ್‌ಗಳಿಂದ ತುಂಬಿದ ಕೋಣೆಯಲೊಂದು ಚಿಕ್ಕ ಟ್ರಾನ್ಸಪೆರೆಂಟ್ ರೂಮ್‌ನಿಂದ ವಿಂಗಡಣೆ ಮಾಡಲಾಗಿತ್ತು.
ವೀಣಾ ಹಾಗು ಲೂಯಿಸ್ ಗೋಡೆಗೆ ಹಾಕಿದ್ದ ದೊಡ್ಡ ಗಾತ್ರದ ಸ್ಕ್ರೀನ್ ಮೇಲೆ ಏನ್ನನ್ನೊ ಗಮನಿಸುತ್ತಿದರೆ, ಅವಳ ತಂದೆ ಇನ್ನೊಂದು ಟಾನ್ಸ್ಸ್ಪರೆಂಟ್ ಗ್ಲಾಸಿನ ಕೋಣೆಯಲ್ಲಿ ಇಟ್ಟಿದ ಕಾಫಿನ್ ಡಬ್ಬದಂತಹ ವಸ್ತುವಿನಲ್ಲಿ ಕೆಲಸ ಮಾಡುತ್ತಿದ್ದರು. ಎತ್ತ ನೊಡಿದರತ್ತ ಮಷಿನ್‌ಗಳ ಚೀತ್‌ಕಾರ. ಕೈದಿಯಂತೆ ಕೂತಿದ್ದ ಮನುವಿನ ಬಳಿ ಬಂದ ಲೂಯಿಸ್ ‘ಮನು ಈ ಮೆಡಿಸನ್ ತೆಕ್ಕೊಳಿ’ ಎಂದ. ವೀಣಾ ಲ್ಯಾಬಿಗೆ ಬರುವ ಮುನ್ನ ಇಟ್ಟಿದ್ದ ಶರತ್ತುಗಳು ನೆನಪಾಗಿ ಮನು ಯಾವ ಪ್ರಶ್ನೆಯನ್ನು ಕೇಳಲ್ಲಿಲ್ಲ. ಮೆಡಿಸನ್ ನುಂಗಿ ನಿಟ್ಟುಸಿರು ಬಿಡುತ್ತಿದಂತೆ, ವೀನಾ ಓಡಿ ಬಂದು ‘ರೇಡಿ ಆಗಿದೆ ವೀ ಕ್ಯಾನ್ ಸ್ಟರ‍್ಟ’ ಎಂದಳು. ಮನು ಏಳುತ್ತಿದ್ದಂತೆ ವೀನಾ ಅವನ್ನನ್ನ ಗಟ್ಟಿಯಾಗಿ ಅಪ್ಪಿಕೊಂಡಳು. ‘ಏನೇ ಇದು ಕೊಣೆ ಬೇಟಿ ತರಾ ಆಡ್ತಾ ಇದ್ದಿಯಾ’ ಮೃದುವಾದ ದ್ವನಿಯಲ್ಲಿ ‘ಯಾಕೆ ಇತರಾ ಮಾತ್ತಾಡ್ತಿಯಾ, ಆಲ್ ದಿ ಬೆಸ್ಟ್’ ಎನ್ನುತ್ತಾ ಅವನ ಕೈ ಹಿಡಿದು ಟ್ರಾನ್ಸಪರೆಂಟ ಕೊಣೆಗೆ ಕರೆದೊಯ್ದಳು. ಕಾಫಿನ್ ಡಬ್ಬದೊಳಗೆ ವೈರ್ ಜೊಡಿಸುತ್ತಿದ ವೀನಾಳ ತಂದೆ ಮುಗಿದಂತೆ ಹೊರಬಂದರು. ಕಾಫಿನ್ ಡಬ್ಬದೊಳಗೆ ಮನು ಸತ್ತವನಂತೆ ಬಿದ್ದುಕೊಂಡ, ವೀನಾ ಕೊಟ್ಟ ಹೆಡ್ಸೆಟ್ ಆಕೃತಿಯ ಮಷಿನ್ ದರಿಸಿದ್ದ. ವೀಣಾ ಮಂಡಿಯೂರಿ ತಲೆಗೆ ಮುತ್ತನ್ನಿಟ್ಟು ಡಬ್ಬ ಮುಚ್ಚತೊಡಗಿದಳು. ಇಬ್ಬರ ಪ್ರೀತಿಯ ಪಯಣಕ್ಕೆ ಅಲ್ಲಿ ಹೊಸ ಅದ್ಯಾಯದ ಕಹಳೆ ಮೊಳಗಿತ್ತು.
ಡಬ್ಬದಲ್ಲಿ ಮಳಗಿದ್ದ ಮನುವಿಗೆ ಸೈರನ್‌ಗಳ ಚೀತ್‌ಕಾರ. ಕಣ್ಣುಬಿಡದಷ್ಟು ಉಜ್ವಳಿಸುತ್ತಿದ್ದ ಬೆಳಕು, ಎದೆಬಡಿತ ದ್ವಿಗುನಗೊಂಡು ತಲೆಯಲ್ಲಿ ಪ್ರಶ್ನಗಳ ಹರಿವೆ ಹರಿಯಿತು. ಪ್ರಯೋಗವು ಸುಸುತ್ರವಾಗಿ ಸಾಗಿದರೆ ಸಾಕೆಂಬ ಆಕಾಂಕ್ಷೆ. ಹೊರಗಡೆ ವೀಣಾ ಕಣ್ಣುಮುಚಿ ಬೇಡಿಕೊಳುತ್ತಿದ್ದರೆ, ಅವಳ ತಂದೆ ಹಾಗೂ ಲೂಯಿಸ್ ಕಂಪ್ಯೂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ದೊಡ್ಡ ಸ್ಕçನಿನಲ್ಲಿ ಕ್ಲೋನಿಂಗ ಮಾಡುವುದಕ್ಕೆ ಬೇಕಾದಂತಾ ಸಮಯ ೨ ಗಂಟೆ ಎನ್ನುತ್ತಿತ್ತು. ರಾಮನ್ ಎಲ್ಲರನ್ನು ಒಮ್ಮೆ ನೋಡಿ ಸ್ಟರ‍್ಟ ಬಟನ್ ದಬ್ಬಿದರು.

ಎಕ್ಸಪೇರಿಮೆಂಟ್ ಮುಗಿಯುವುದಕ್ಕೆ ೨ ನಿಮಿಷ:
ಕೊನೆಯ ಹಂತ ತಲುಪುತ್ತಿದಂತೆ ಕೆಲಸವು ಭರದಿಂದ ಸಾಗುತ್ತಿತ್ತು. ಡಬ್ಬದಲ್ಲಿ ಮುಳುಗಿದ್ದ ಮನುವಿಗೆ ಜಗತ್ತಿನ ಅರಿವೇ ಇರಲ್ಲಿಲ್ಲ. ಕೋಣೆಯ ಹೊರಗಡೆ ಜಗತ್ತೇ ತಲೆ ಮೇಲೆ ಬಿದ್ದವರ ಹಾಗೆ ರಾಮನ್ ಹಾಗೂ ಲೂಯಿಸ್ ಕೆಲಸ ಮಾಡುತ್ತಿದ್ದರೆ, ವೀಣಾ ಅತ್ತಿಂದಿತ್ತ ಚಿಂತೆಯಲ್ಲಿ ಮುಳುಗಿ ಹೋಗಿದ್ದಳು. ಇವಳಿಗೆ ಪ್ರಯೋಗವೂ ಸುಸುತ್ರವಾಗಿ ಸಾಗುತ್ತಿದೆ ಎಂಬ ಸಂತೃಪ್ತಿ ಒಂದೆಡೆಯಾದರೆ ಒಳಗಡೆ ಮುಳುಗಿದ್ದ ಮನು ಹೇಗಿರುವಣೊ ಎಂಬ ತಳಮಳ ಒಂದೆಡೆಯಿತ್ತು. ಅದನ್ನೇ ಚಿಂತಿಸುತ್ತಿದ್ದ ವೀಣಾಳನ್ನು ಭೇದಿಸುವಂತೆ ಮಷಿನ್ನಿನಿಂದ ಕೌಂಟ್ ಡೌನ್ ಆರಂಭಗೊoಡಿತು. ಪಕ್ಕದಲ್ಲಿದ್ದ ತಂದೆಯು ಸನ್ನೆ ಮಾಡಿ ಬಾಗಿಲ ಬಳಿ ಹೋಗಲು ಹೇಳಿದರು. ದವಡಾಯಿಸಿದ ವೀಣಾಳ ಕಣ್ಣಲ್ಲಿ ಗೆದ್ದಿದ್ದೆನೆಂಬ ಖುಷಿ ಕಾಣುತ್ತಿತ್ತು.
ಚಿರ್ ಶಬ್ದ, ಪ್ರಕಾಶಮಾನವಾದ ಬೆಳಕು, ಹೀಗೆ ಬಾಕ್ಸ್ ನ ವಾತಾವರಣಕ್ಕೆ ಮನು ಒಗ್ಗಿಕೊಂಡoತ್ತಿತ್ತು. ಕಣ್ಣು ಸಂಪೂರ್ಣವಾಗಿ ತೆರೆದು ಅಕ್ಕ ಪಕ್ಕ ಕಣ್ಣು ಹಾಯಿಸುತ್ತಿದ್ದ, ಆದರೆ ತಿರುಗಳಾಗದಂತ ಇಕ್ಕಟ್ಟಿನ ಜಾಗ ಅದಾಗಿತ್ತು. ಕೆಲವು ನಿಮಿಷಗಳ ತರುವಾಯ ಬಾಕ್ಸ್ ಇದ್ದಕ್ಕಿದಂತೆ ತೆರೆದುಕೊಂಡಿತು. ವೀಣಾಳನ್ನು ನೀರಿಕ್ಷಿಸುತ್ತಿದ್ದ ಮನುವಿನ ಕಣ್ಣಲ್ಲಿ ಪರಮಾಶ್ಚರ್ಯ, ಶವದಂತೆ ಮಳಗಿದ್ದ ಇವನ ತಲೆ ಮೇಲೆ ಯಾವುದೊ ಮರ. ಗೊಂದಲದಲ್ಲಿ ಮೇಲೆಳುತ್ತಾ ಅಕ್ಕ ಪಕ್ಕ ಕಣ್ಣು ಹಾಯಿಸಿದ. ಚಿರ್ ಶಬ್ದ ಕೇಳಿ ರೋಸಿಹೋಗಿದ್ದ ಇವನ ಕಿವಿಗೆ, ದೂರದ ನವಿಲಿನ ಕೂಗು ಇಂಪುಗೊಳಿಸಿತು. ಮನು ಸುಂದರ ರಮನೀಯವಾದ ಕಾಡಿನಿಂದ ಸುತ್ತುವರಿದ್ದಿದ್ದ. ಟ್ರಾನ್ಸ್ ಪರೆಂಟ್ ಕೋಣೆ ಮಷಿನ್ ಗಳಲ್ಲಿ ‘ವೀಣಾ’ ಎಂದು ಜೋರಾಗಿ ಕಿರುಚಿದ.
ಟ್ರಾನ್ಸ್ ಪರೆಂಟ್ ಕೋಣೆಯ ಬಾಗಿಲ ಬಳಿ ಕಾಯುತ್ತಿದ್ದ ವೀಣಾ ‘ಮನು ನಿನ್ನ ಎದೆಗೆ ಅಪ್ಪಿ ಸುಸ್ತಾಗೊವರೆಗು ಅಳಬೇಕು. ನಮ್ಮ ಪ್ರೀತಿಯ ಸಂಕೇತವಾಗಿ ಹುಟ್ಟುತ್ತಿರುವ ಈ ಕುಡಿಯ ಸಿಹಿಸುದ್ದಿಯನ್ನು ನಿನ್ನೊಡನೆ ಹಂಚಿಕೊಳ್ಬೇಕು.’ ಎಂದು ತನ್ನ ಒಡನಾಡಿಗೆ ಹೇಳಿಕೊಂಡಳು
ಹಸಿರು ಚಿಹ್ನೆ ಸಿಗುತ್ತಿದಂತೆ, ವೀಣಾ ಒಳ ನಡೆದಳು. ಮಂದಹಾಸದಿ0ದ ಡಬ್ಬದ ಮುಂದೆ ನಿಂತ0ತೆ, ನಿಧಾನಗತಿಯಲ್ಲಿ ಮುಚ್ಚಳು ತೆರೆದುಕೊಂಡಿತು. ಮಂದಹಾಸದಲ್ಲಿ ನಿಂತ್ತಿದ್ದ ವೀಣಾಳ ಕಣ್ಣ ಮುಂದೆ ಮಿಂಚೊoದು ಹರಿಯಿತು. ಮಾತು ಹೊರಳುತ್ತಿಲ್ಲಾ ನೆಲಕ್ಕೆ ಅಪ್ಪಳಿಸಿದನ್ನು ತಂದೆಯು ಕಂಡು ದವಡಾಯಿಸಿದರು. ವೀಣಾ ನಿಧಾನಗತಿಯಲ್ಲಿ ಕಣ್ಣುಮುಚಿದಳು.
- ಕಿರಣ್ ಕುಲಕರ್ಣಿ









